‏ 2 Chronicles 24:20-22

20ಆಗ ದೇವರ ಆತ್ಮ ಯಾಜಕ ಯೆಹೋಯಾದಾವನ ಮಗನಾದ ಜೆಕರ್ಯನ ಮೇಲೆ ಬಂದು, ಅವನು ಜನರ ಮುಂದೆ ನಿಂತು ಅವರಿಗೆ, “ನೀವು ವೃದ್ಧಿ ಹೊಂದಕೂಡದ ಹಾಗೆ ಯೆಹೋವ ದೇವರ ಆಜ್ಞೆಗಳನ್ನು ಮೀರುವುದೇನು? ನಿಮಗೆ ಶುಭವಾಗುವುದಿಲ್ಲ. ನೀವು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ದೇವರು ಸಹ ನಿಮ್ಮನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.

21ಆದ್ದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಯೆಹೋವ ದೇವರ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು. 22ಹಾಗೆಯೇ ಅರಸನಾದ ಯೋವಾಷನು, ಇವನ ತಂದೆಯಾದ ಯೆಹೋಯಾದಾವನು ತನಗೆ ತೋರಿಸಿದ ದಯೆಯನ್ನು ಜ್ಞಾಪಕಮಾಡದೆ ಅವನ ಮಗನನ್ನು ಕೊಂದುಹಾಕಿದನು. ಜೆಕರ್ಯನು ಸಾಯುವಾಗ, “ಯೆಹೋವ ದೇವರು ನೋಡಿ ವಿಚಾರಿಸಲಿ,” ಎಂದು ಹೇಳಿದನು.
Copyright information for KanKSB