Leviticus 23:16-20
16ಏಳನೆಯ ಸಬ್ಬತ್ ದಿನದ ಮಾರನೆಯ ದಿನದಿಂದ ನೀವು ಐವತ್ತು ದಿನಗಳನ್ನು ಲೆಕ್ಕಿಸಬೇಕು. ನೀವು ಯೆಹೋವ ದೇವರಿಗೆ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸಬೇಕು. 17ಇದಲ್ಲದೆ ನೀವು ನಿಮ್ಮ ಮನೆಗಳಿಂದ ತಂದ ಹಿಟ್ಟಿನಲ್ಲಿ ಎರಡೆರಡು ಓಮರ್ ಹಿಟ್ಟಿನಿಂದ ಎರಡು ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋಧಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವ ದೇವರಿಗೆ ನೈವೇದ್ಯವಾಗಿ ನಿವಾಳಿಸಬೇಕು. 18ಇದಲ್ಲದೆ ನೀವು ರೊಟ್ಟಿಯೊಂದಿಗೆ ಕಳಂಕರಹಿತವಾದ ಒಂದು ವರ್ಷದ ಏಳು ಕುರಿಮರಿಗಳನ್ನೂ ಒಂದು ಎಳೆಯ ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಅವು ಯೆಹೋವ ದೇವರಿಗೆ ದಹನಬಲಿಗಳಾಗುವುವು. ಅವುಗಳೊಂದಿಗೆ ಆಹಾರ ಬಲಿಯು ಮತ್ತು ಪಾನಾರ್ಪಣೆಗಳು, ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯಾದ ಅರ್ಪಣೆಗಳಾಗಿರಬೇಕು. 19ತರುವಾಯ ಹೋತವನ್ನು ಪಾಪ ಪರಿಹಾರದ ಬಲಿಯಾಗಿಯೂ ಮತ್ತು ಸಮಾಧಾನ ಬಲಿಯಾಗಿ ಒಂದು ವರ್ಷದ ಎರಡು ಕುರಿಮರಿಗಳನ್ನು ಬಲಿಯಾಗಿ ಅರ್ಪಿಸಬೇಕು. 20ಯಾಜಕನು ಯೆಹೋವ ದೇವರ ಸನ್ನಿಧಿಯಲ್ಲಿ ಪ್ರಥಮ ಫಲದ ರೊಟ್ಟಿಯೊಂದಿಗೂ, ಎರಡು ಕುರಿಮರಿಗಳೊಂದಿಗೂ ಅವುಗಳನ್ನು ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವ ದೇವರಿಗೆ ಪರಿಶುದ್ಧವಾಗಿದ್ದು ಯಾಜಕನಿಗೋಸ್ಕರ ಇರಬೇಕು.
Copyright information for
KanKSB