‏ Psalms 126

ಯಾತ್ರಾ ಗೀತೆ.

1ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ
ನಾವು ಕನಸು ಕಂಡವರ ಹಾಗಿದ್ದೆವು.
2ಆಗ ನಮ್ಮ ಬಾಯಿ ನಗೆಯಿಂದಲೂ,
ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು;
ಆಗ ಜನಾಂಗಗಳು,
“ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
3ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ;
ಆದಕಾರಣ ಸಂತೋಷಿಸುತ್ತಾ ಇದ್ದೇವೆ.

4ಯೆಹೋವ ದೇವರೇ, ನೆಗೆವನಲ್ಲಿರುವ
ನೆಗೆವನಲ್ಲಿರುವ ಅಂದರೆ ದೇಶದ ದಕ್ಷಿಣ ಪ್ರಾಂತ್ಯ
ಹೊಳೆಗಳ ಹಾಗೆ
ಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
5ಕಣ್ಣೀರಿನಿಂದ ಬಿತ್ತುವವರು,
ಆನಂದ ಗೀತದೊಡನೆ ಕೊಯ್ಯುವರು;
6ಬಿತ್ತಲು ಬೀಜವನ್ನು ಹೊತ್ತುಕೊಂಡು
ಅಳುತ್ತಾ ಹೋಗುವವರು,
ತಮ್ಮ ಸಿವುಡುಗಳನ್ನು ಹೊತ್ತುಕೊಂಡು
ಆನಂದ ಗೀತದೊಡನೆ ತಿರುಗಿ ಬರುವರು.
Copyright information for KanKSB