‏ Psalms 95:7-11

7ಅವರು ನಮ್ಮ ದೇವರು;
ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ,
ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ.

ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು.
8“ನೀವು ಮೆರೀಬದಲ್ಲಿ
ಮೆರೀಬ ಅಂದರೆ ಜಗಳ ಎಂದು ಅರ್ಥ. ನೋಡಿರಿ ವಿಮೋ 17:7; ಅರಣ್ಯ 17:7
ಮಾಡಿದಂತೆ,
ಹೌದು, ಅಂದು ನೀವು ಮರುಭೂಮಿಯ ಮಸ್ಸಾ
ಮಸ್ಸಾ ಅಂದರೆ ಪರೀಕ್ಷೆ. ನೋಡಿರಿ ವಿಮೋ 17:7; ಅರಣ್ಯ 17:7
ಎಂಬ ಸ್ಥಳದಲ್ಲಿ ಮಾಡಿದಂತೆ, ನಿಮ್ಮ ಹೃದಯವನ್ನು ಕಠಿಣಪಡಿಸಬೇಡಿರಿ.
9ನಾನು ಮಾಡಿದ್ದನ್ನು ಕಂಡಿದ್ದರೂ,
ಅಲ್ಲಿ ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿದರು.
10ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು,
‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ,
ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು.
11ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು
ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.
Copyright information for KanKSB