Psalms 126
ಯಾತ್ರಾ ಗೀತೆ. 1ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗನಾವು ಕನಸು ಕಂಡವರ ಹಾಗಿದ್ದೆವು.
2ಆಗ ನಮ್ಮ ಬಾಯಿ ನಗೆಯಿಂದಲೂ,
ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು;
ಆಗ ಜನಾಂಗಗಳು,
“ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
3ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ;
ಆದಕಾರಣ ಸಂತೋಷಿಸುತ್ತಾ ಇದ್ದೇವೆ.
4ಯೆಹೋವ ದೇವರೇ, ನೆಗೆವನಲ್ಲಿರುವ ▼
▼ನೆಗೆವನಲ್ಲಿರುವ ಅಂದರೆ ದೇಶದ ದಕ್ಷಿಣ ಪ್ರಾಂತ್ಯ
ಹೊಳೆಗಳ ಹಾಗೆಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
5ಕಣ್ಣೀರಿನಿಂದ ಬಿತ್ತುವವರು,
ಆನಂದ ಗೀತದೊಡನೆ ಕೊಯ್ಯುವರು;
6ಬಿತ್ತಲು ಬೀಜವನ್ನು ಹೊತ್ತುಕೊಂಡು
ಅಳುತ್ತಾ ಹೋಗುವವರು,
ತಮ್ಮ ಸಿವುಡುಗಳನ್ನು ಹೊತ್ತುಕೊಂಡು
ಆನಂದ ಗೀತದೊಡನೆ ತಿರುಗಿ ಬರುವರು.
Copyright information for
KanKSB