Isaiah 42:1-4
ಯೆಹೋವ ದೇವರ ಸೇವಕ
1“ಇಗೋ, ನನ್ನ ಸೇವಕನು. ಇವನಿಗೆ ನಾನೇ ಆಧಾರ,ನಾನು ಆಯ್ದುಕೊಂಡವನಲ್ಲಿ ನನ್ನ ಆತ್ಮವು ಆನಂದಿಸುವುದು;
ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ,
ಅವನು ಇತರ ಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.
2ಅವನು ಕೂಗುವುದಿಲ್ಲ, ಶಬ್ದವನ್ನು ಎತ್ತುವುದಿಲ್ಲ,
ಬೀದಿಗಳಲ್ಲಿ ತನ್ನ ಧ್ವನಿಯನ್ನು ಕೇಳಗೊಡಿಸುವುದಿಲ್ಲ.
3ಜಜ್ಜಿದ ದಂಟನ್ನು ಮುರಿದು ಹಾಕದೆ,
ಕಳೆಗುಂದಿದ ದೀಪವನ್ನು ನಂದಿಸದೆ,
ನಂಬಿಕೆಯಿಂದ ನ್ಯಾಯವನ್ನು ಹೊರತರುತ್ತಾನೆ.
4ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಈತನು ಬಿಟ್ಟುಕೊಡುವುದಿಲ್ಲ, ಮನಗುಂದುವುದಿಲ್ಲ,
ದ್ವೀಪಗಳು ಈತನ ಬೋಧನೆಗೆ ಎದುರುನೋಡುವುವು.”
Copyright information for
KanKSB